ಭಾರತಾಂಬೆ ನಾ ಅಳುತಿರುವೆ
ಭಾರತಾಂಬೆ ನಾ ಬಳಲಿರುವೆ

ನೀಡುತ್ತಿದ್ದೆ ನೀ ಜಗತ್ತಿಗೆ ಆಧ್ಯಾತ್ಮಿಕತೆ ಹಾಗೂ ಭಕ್ತಿ
ಇಂದಾಗಿಹೆ ನೀ ಬಡತನದಲ್ಲಿ ಬಳಲುತ್ತಿರುವ ಒಂದು ಪರಮಾಣು ಶಕ್ತಿ

ಕಟ್ಟಿಹೆವು ನಾವು ಎತ್ತರದ ದಂತಗೋಪುರ
ಹೊರಗೆ ಘಳಿಗೆಗೊಮ್ಮೆ ಹುಟ್ಟುತ್ತಿವೆ ಒಂದು ನೂತನ ಕೊಳೆಗೇರಿ ನಗರ

ಮಂತ್ರಿಗಳು ನಿನ್ನ ಸಂಪತ್ತನ್ನು ಮಾಡುತಿಹರು ಲೂಟಿ
ಹಗೆತನ ಸಾರುವ ಮಂದಿ ನೆರೆಹೊರೆಯಲ್ಲಿಹರು ಕೋಟಿ

ಮರೆಯುತಿಹರು ನಿನ್ನನ್ನು ನಿನ್ನದೇ ಸ್ವಂತ ಜನ
ಕೆಳಗೆಳೆಯುತಿಹವು ಚಲನಚಿತ್ರಗಳು ನಿನ್ನನ್ನು ಪ್ರತಿದಿನ

ಮಾಡುತಿಹರು ನಿನ್ನ ದೇವರುಗಳು ನಿನ್ನನ್ನು ಖಂಡತುಂಡ
ದಾರಿತಪ್ಪಿಸುತಿಹವು ನಿನ್ನನ್ನು ಧರ್ಮಗುರುಗಳು ತಂಡ ತಂಡ

ರಕ್ಷಕರ ವೇಷದಲ್ಲಿಹರು ರಾಕ್ಷಸರು
ಬೆಳೆಯುತಿಹರಿಂದು ಈ ಭಕ್ಷಕರು

ಭಾರತಾಂಬೆ ನಾ ಅಳುತಿರುವೆ
ಭಾರತಾಂಬೆ ನಾ ಬಳಲಿರುವೆ

ಆಂಗ್ಲ ಮೂಲ: ರೆಮೋ ಫರ್ನಾಂಡೀಸ್
ಕನ್ನಡಾನುವಾದ: ಗುರುದೇವ್

Copyright protected by Digiprove © 2009-2012