HitXP - ತೋಚಿದ್ದು ಗೀಚಿದ್ದು- ಗುರುದೇವ್ ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
- Dec31
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ
ಗುರುದೇವ; ವಿಭಾಗ: ಸಾಹಿತ್ಯ;ಏರಿದರೆ ಮಂಚ ಗದ್ದುಗೆ ಸಿಂಹಾಸನ
ಹೆಚ್ಚೆಂದರೆ ಎರಡು ಮೂರಡಿ ಮೇಲೆ
ಜಾರಿದರೆ ಗೋರಿ ಸಮಾಧಿ ಬೃಂದಾವನ
ಹೆಚ್ಚೆಂದರೆ ಎರಡು ಮೂರಡಿ ಕೆಳಗೆ
- ಜರಗನಹಳ್ಳಿ ಶಿವಶಂಕರ್ ರವರ ಒಂದು ಅದ್ಭುತ ಚುಟುಕಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
- ಭಕ್ತ ಕುಂಬಾರ ಚಿತ್ರದ ಗೀತೆಯೊಂದರಲ್ಲಿ ಬರುವ ಅದ್ಭುತ ಸಾಲು.ರಾಜ ಮಹಾರಾಜರು ಎಲ್ಲ ಮಣ್ಣಾದರು ಇನ್ನು ಸ್ಥಿರವಾಗಿ ನಿಲ್ಲೋರು ಯಾರು
ಒಳ್ಳೆ ಹಣವಂತರು ಇಲ್ಲಿ ಹೆಣವಾದರು ಇನ್ನು ಚಿರಕಾಲ ಬಾಳೋರು ಯಾರು
- ರಾಘವೇಂದ್ರ ರಾಜ್‍ಕುಮಾರ್ ನಟಿಸಿರುವ ಚಿತ್ರದ ಗೀತೆಯೊಂದರ ಸಾಲುನಾವು ಬರುವಾಗ ಏನನ್ನೂ ಹೊತ್ತುಕೊಂಡು ಬರೊಲ್ಲ
ಮರಳಿ ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗೊಲ್ಲ
- ಒಂದು ಗಾದೆನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
- ದ. ರಾ. ಬೇಂದ್ರೆ
Copyright secured by Digiprove © 2009 Gurudev Rao
’



