ನಮ್ಮ ಜನ ಹೆಂಗಂದ್ರೆ ೪೫ ರೂಪಾಯಿ ಕೊಟ್ಟು ಕೋಕಾಕೋಲಾ ತಗೊಳ್ತಾರೆ, ಆ ಕಂಪನಿಗೆ ಅದರಲ್ಲಿ ೪೦ ರೂಪಾಯಿ ಲಾಭ! ಅದೇ ಜನ, ಎಳನೀರು ಮಾರುವವನು ೧೦ ರೂಪಾಯಿ ಅಂದರೆ ೬ ರೂಪಾಯಿಗೆ ಕೇಳುತ್ತಾರೆ!! ಕೋಕಾಕೋಲಾ ಆರೋಗ್ಯಕ್ಕೆ ಹಾನಿಕಾರಕ, ಎಳನೀರು ಅತ್ಯುತ್ತಮ ಪಾನೀಯ! ಬಿಗ್ ಬಜಾರ್, ಸುಭೀಕ್ಷಾ, ಮಂಡೆ ಟು ಸಂಡೆ ಇತ್ಯಾದಿ ಮಳಿಗೆಗಳಲ್ಲಿ ನೂರಾರು ರೂಪಾಯಿ ಕೊಟ್ಟು ಹಣ್ಣು, ತರಕಾರಿ ಕೊಳ್ಳುತ್ತಾರೆ ಮನೆ ಬಾಗಿಲಿಗೆ ಬರುವ ಹಣ್ಣು ತರಕಾರಿ ಗಾಡಿ ಮಾರುವವನ ಬಳಿ ೨-೫ ರೂಪಾಯಿಗೆ ಚೌಕಾಸಿ ಮಾಡ್ತಾರೆ! ಬಹುರಾಷ್ಟ್ರೀಯ [...]
ನಮ್ಮ ಜನ ಹೆಂಗಂದ್ರೆ…
ಜೂನ್ ೧೭ಕನ್ನಡ ಸಂಗೀತ ಪ್ರಾಕಾರಗಳು
ಜೂನ್ ೧೭‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಹೀಗೆಂದು ನ್ರಪತುಂಗ ಕವಿ ಕನ್ನಡಿಗರನ್ನು ಬಣ್ಣಿಸಿದ್ದಾನೆ! ಓದು ಬರಹ ತಿಳಿಯದ ಕನ್ನಡಿಗರೂ ಕಾವ್ಯ-ಕವಿತೆ ಬಲ್ಲವರಾಗಿದ್ದರು ಎನ್ನುತ್ತಾನೆ ಆತ! ಜಾನಪದ ಗೀತೆಗಳು ಕನ್ನಡದ ಹಳ್ಳಿಹಳ್ಳಿಗಳಲ್ಲೂ ಪ್ರಸಿದ್ಧ! ಈ ಗೀತೆಗಳ ರಚನೆಕಾರರು ಸಾಮಾನ್ಯ ಹಳ್ಳಿಜನ! ಸಂಗೀತವೂ ಅವರದ್ದೇ! ಇನ್ನು ಸುಗಮ ಸಂಗೀತ. ಇದು ಕಾವ್ಯ ಗಾಯನ. ಕುವೆಂಪು, ಜಿ ಎಸ್ ಎಸ್, ಬೇಂದ್ರೆ ಮುಂತಾದ ಮಹಾಕವಿಗಳ ಗೀತೆಗಳ ಗಾಯನ. ಇಲ್ಲಿ ಸಂಗೀತಕ್ಕಿಂತ ಸಾಹಿತ್ಯ ಮುಖ್ಯ. ಆದ್ದರಿಂದ ಸುಗಮ ಸಂಗೀತವನ್ನು ಕೊಳಲು/ವೀಣೆಯಲ್ಲಿ ನುಡಿಸುವುದಿಲ್ಲ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರಂತಹ [...]




