ಮುಖಪುಟ » 'ಸಾಹಿತ್ಯ' ವಿಷಯದ ಲೇಖನಾಗಾರ

ಕನ್ನಡ ಸಂಗೀತ ಪ್ರಾಕಾರಗಳು

‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಹೀಗೆಂದು ನ್ರಪತುಂಗ ಕವಿ ಕನ್ನಡಿಗರನ್ನು ಬಣ್ಣಿಸಿದ್ದಾನೆ! ಓದು ಬರಹ ತಿಳಿಯದ ಕನ್ನಡಿಗರೂ ಕಾವ್ಯ-ಕವಿತೆ ಬಲ್ಲವರಾಗಿದ್ದರು ಎನ್ನುತ್ತಾನೆ ಆತ! ಜಾನಪದ ಗೀತೆಗಳು ಕನ್ನಡದ ಹಳ್ಳಿಹಳ್ಳಿಗಳಲ್ಲೂ ಪ್ರಸಿದ್ಧ! ಈ ಗೀತೆಗಳ ರಚನೆಕಾರರು ಸಾಮಾನ್ಯ ಹಳ್ಳಿಜನ! ಸಂಗೀತವೂ ಅವರದ್ದೇ! ಇನ್ನು ಸುಗಮ ಸಂಗೀತ. ಇದು ಕಾವ್ಯ ಗಾಯನ. ಕುವೆಂಪು, ಜಿ ಎಸ್ ಎಸ್, ಬೇಂದ್ರೆ ಮುಂತಾದ ಮಹಾಕವಿಗಳ ಗೀತೆಗಳ ಗಾಯನ. ಇಲ್ಲಿ ಸಂಗೀತಕ್ಕಿಂತ ಸಾಹಿತ್ಯ ಮುಖ್ಯ. ಆದ್ದರಿಂದ ಸುಗಮ ಸಂಗೀತವನ್ನು ಕೊಳಲು/ವೀಣೆಯಲ್ಲಿ ನುಡಿಸುವುದಿಲ್ಲ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರಂತಹ [...]

ಕನ್ನಡದ Quick Brown Fox

ಪುಣ್ಯಾತ್ಮ ಸ್ನೇಹಿತನೊಬ್ಬ ಕಳಿಸಿದ email - ಎಲ್ಲ ಕನ್ನಡಿಗರಿಗಾಗಿ ಈ ಪದ್ಯದ ತುಣುಕಲ್ಲಿ ಕನ್ನಡದ ಸಂಪೂರ್ಣ ಸ್ವರಮಾಲೆಯನ್ನು ಉಪಯೋಗಿಸಲಾಗಿದೆ!

ಹಾರುತ ದೂರ ದೂರ

ಹಂಸವೆಲ್ಲಿ ಹಾರುವೆ? ಸಪ್ತ ಸಾಗರದಾಚೆಗೆ, ಸುಪ್ತ ಮನಸಿನ ತೀರಕೆ ನಿನ ಕನಸಿನ ರೆಕ್ಕೆಯ ಗರಿ ಬಿಚ್ಚಿ ಒಳ ಮನಸಿನ ದಿಟ್ಟೆಯ ಗೆರೆ ಹಚ್ಚಿ ದೂರತೀರದಾಚೆಗೆ ನೂರು ಮನಸಿನ ವೇಗದಿ ನೆನಪಿನ ಮನೆಯಂಗಳದಿಂದ ಭರವಸೆಗಳ ಕಂಗಳ ತುಂಬಿ ನಾಳೆಗಳ ನಾಡಿಗೆ ಸಾಧನೆಯ ಗೂಡಿಗೆ ಸರಿಗಮಗಳ ಗಾಳಿಯನೇರಿ ಅಪಸ್ವರಗಳ ಧಾಳಿಯ ಮೀರಿ ರಾಗಗಳ ನಾಡಿಗೆ ಅನುರಾಗದ ಗೂಡಿಗೆ ನಿನ್ನೆಯ ಕಹಿ ಜಾಲವ ಹರಿದು ನಿನ್ನಯ ವರ ಮಾಲೆಯ ಹಿಡಿದು ನಲ್ಲನಿರುವ ನಾಡಿಗೆ ನಾಳೆ ಬಾಳೊ ಗೂಡಿಗೆ -ಗೀಚಿದವರು ಗುಂಗುರು ಗುರು

ಸುಧೆಯೋ ಕನ್ನಡ ಸವಿನುಡಿಯೋ

ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು? ಭಾರತೀಯ ಭಾಷೆಗಳಲ್ಲಿ ಸಂಸ್ಕ್ರತ ಹಾಗೂ ತಮಿಳಿನ ನಂತರ ಕನ್ನಡವೇ ಅತ್ಯಂತ ಹಳೆಯ ಭಾಷೆ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ ಕನ್ನಡಕ್ಕೆ ಅತಿ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳು ದೊರೆತಿವೆ. ಇದುವರೆಗೂ ಒಟ್ಟು 7. ರಾಷ್ತ್ರ ಭಾಷೆ ಹಿಂದಿಗೆ 6 ದೊರೆತಿವೆ. ಆಚಾರ್ಯ ವಿನೋಭಾ ಭಾವೆ ಕನ್ನಡದ ಲಿಪಿಯನ್ನು ‘ವಿಶ್ವ ಲಿಪಿಗಳ ರಾಣಿ’ ಎಂದು ಕರೆದರು ಇಂಗ್ಲೀಷಿಗೆ ಸ್ವಂತ ಲಿಪಿಯಿಲ್ಲ, ಅದನ್ನು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಹಿಂದಿಗೆ ಸ್ವಂತ ಲಿಪಿಯಿಲ್ಲ, ಅದನ್ನು ದೇವನಾಗರಿ ಲಿಪಿಯಲ್ಲಿ [...]

ಸೃಷ್ಟಿ-ಸಂಗೀತ

ದುಂಬಿಯ ಝೇಂಕಾರ ಋಷಿ ಮುನಿ ಓಂಕಾರ ಮಂತ್ರದ ಹ್ರೀಂಕಾರ ಸಿಂಹದ ಹೂಂಕಾರ ನಾದಲೀನ ಲೀನನಾದೆ ನಾ ನೀದಮಾಗ ಗಾನದಿಂ ದಿನ || ಬೆಳ್ಳಿಕಿರಣಗಳ ಅರುಣರಾಗ ಬಳ್ಳಿಮರದಡಿಯ ನಿಸರಿಗಮಗ ಗಲ್ಲಿಹೈಕಳ ಕುಣಿತ, ಲಾಗ, ಹಲ್ಲಿ ಮೈಮರೆತು ಲೊಚೆದ ರಾಗ ನಾ ತಲ್ಲೀನ ನಾದೆನೀ ದಿನ ಧೀಂ ತಿಲ್ಲಾನವಾಯಿತೀ ಮನ || ಜಲದ ಧಾರೆ ಕಲಕಲಕಲರವ ಜಲಜದೊಡತಿ ಕರ ಸರಿವ ಪರಿಯವ ಜಲದಿ ನೀರೆ ನಲಿ ನಲಿವ ಉಲಿತವ ಜಳಕವಾಡುತಿರೆ ಬಳುಕೊ ಅಲೆ ರವ ಪುರುಷ ಪ್ರಕೃತಿ ಸರಿಗ ಸಂಗಮ [...]

ಕಾಲು – ಮೊಬೈಲು

ಹೀಗೊಂದು SMS ಬಂತು: Mobileನಲ್ಲಿ balance ಇಲ್ಲ ಅಂದ್ರೆ ಕಾಲ್ ಮಾಡೊಕ್ಕಾಗೊಲ್ಲ  ಮನುಷ್ಯಂಗೆ ಕಾಲಿಲ್ಲ ಅಂದ್ರೆ balance ಮಾಡೊಕ್ಕಾಗೊಲ್ಲ !