ಇತ್ತೀಚೆಗೆ ಗೆಳೆಯರೊಂದಿಗೆ ಬೆಂಗಳೂರಿನ ಫೋರಂ ಮಾಲ್ ಗೆ ಹೋಗಿದ್ದೆ, ಕೆಲವು ಖಾಲಿ DVDಗಳನ್ನು ಕೊಳ್ಳಬೇಕಿತ್ತು, ನನ್ನ ಕಂಪ್ಯೂಟರ್ ನಲ್ಲಿನ ಮಾಹಿತಿಯನ್ನು ಬರೆದಿಟ್ಟುಕೊಳ್ಳಲು.
ಅಲ್ಲಿ, “ಮೋಸರ್ ಬೇರ್ ಕಂಪೆನಿಯ ೧೦ ಖಾಲಿ DVDಗಳನ್ನು ಕೊಡಿ” ಎಂದೆ. ಅದಕ್ಕೆ ಅಂಗಡಿಯವರು ”ಮೋಸರ್ ಬೇರ್ ಇಲ್ಲ ಸಾರ್, ಬೇರೆ ಕಂಪೆನಿ DVD ಇದೆ, ಕೊಡಲಾ?” ಎಂದರು. “ಬೇಡ” ಎಂದು ಹೇಳಿ ಬೇರೆ ಅಂಗಡಿಗೆ ತೆರಳಿ ಅಲ್ಲಿ ಮೋಸರ್ ಬೇರ್ DVD ಕೊಂಡುಕೊಂಡೆ.
ಇದನ್ನೆಲ್ಲ ನೋಡುತ್ತಿದ್ದ ನನ್ನ ಗೆಳೆಯರು, “ಯಾಕೋ ಮೋಸರ್ ಬೇರ್ DVDನೇ ಬೇಕು ನಿನಗೆ?”, ಎಂದು ಕೇಳಿದರು. ಆಗ ನನಗೆ ಹೊಳೆಯಿತು, ಇವರಿಗೆ ಮೋಸರ್ ಬೇರ್ ಒಂದು ಭಾರತೀಯ ಕಂಪೆನಿ ಎಂಬುದು ತಿಳಿದಿಲ್ಲ, ಎಂದು.
![]()
ಹೌದು, ಮೋಸರ್ ಬೇರ್ ಒಂದು ಭಾರತೀಯ ಯಶೋಗಾಥೆ. ಇದು ಪ್ರಪಂಚದ ಎರಡೆನೇ ಅತಿ ದೊಡ್ಡ CD/DVD ತಯಾರಕ ಸಂಸ್ಥೆ. ಜಗತ್ತಿನ ಮಾರುಕಟ್ಟೆಯಲ್ಲಿ ಶೇ17.5 ರಷ್ಟು ಸಿಂಹಪಾಲು! ದೆಹಲಿ ಮೂಲದ ಈ ಸಂಸ್ಥೆಯ ಎಲ್ಲ ನಾಲ್ಕು ಅತ್ಯಾಧುನಿಕ CD/DVD ತಯಾರಕ ಘಟಕಗಳು ಉತ್ತರ ಪ್ರದೇಶದ ನೋಯ್ಡಾದಲ್ಲಿವೆ.
ತನ್ನ ಅತ್ಯಾಧುನಿಕ ಸಂಶೋಧನೆಗಳಿಂದ ಮೋಸರ್ ಬೇರ್ ಇಂದು ಪ್ರಪಂಚದ ಅತ್ಯುನ್ನತ ಗುಣಮಟ್ಟದ CD/DVDಗಳನ್ನು ಪ್ರಪಂಚದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ತಯಾರಿಸುತ್ತದೆ.
ಇಲ್ಲಿನ ತಯಾರಕ ಘಟಕಗಳಿಂದ ಹೊರಬರುವ ‘Made in India’ ಎಂಬ ಫಳಫಳಿಸುವ ಅಚ್ಚು ಹೊತ್ತ CD/DVD ಗಳ ಬಗ್ಗೆ ಇಲ್ಲಿನ ಕಾರ್ಮಿಕರು ಗರ್ವದಿಂದ ಬೀಗುತ್ತಾರೆ.
Click here for the english version of this article: ಇದು ನನ್ನ ಆಂಗ್ಲ ಲೇಖನದ ಕನ್ನಡಾನುವಾದ
ಧನ್ಯವಾದಗಳು ಗುರು. ಮೋಸರ್ ಬೇರ್ ಅತ್ಯುನ್ನತ ಗುಣಮಟ್ಟದ ಸಿ.ಡಿ. / ಡಿ.ವಿ.ಡಿ. ಗಳನ್ನು ತಯಾರಿಸುವ ಭಾರತೀಯ ಕಂಪೆನಿ ಎಂಬುದು ತುಂಬಾ ಹೆಮ್ಮೆಯ ಸಂಗತಿ. ನಾನಂತೂ ಹಿಂದಿನ ೧೮ ವರುಷಗಳಿಂದ ನಾನು ಉಪಯೋಗಿಸುತ್ತಿರುವ “Made In India” ಕೈಗಡಿಯಾರವನ್ನು ನನ್ನ ದೇಶೀಯ ಮತ್ತು ವಿದೇಶೀಯ ಮಿತ್ರರಿಗೆ ಹೆಮ್ಮೆಯಿಂದ ತೋರಿಸುತ್ತಿರುತ್ತೇನೆ. ನಮ್ಮ ದೇಶದಲ್ಲಿ ತಯಾರಾಗುವ ಯಾವುದೇ ಸಾಮಾಗ್ರಿಗಳಾಗಿರಲಿ, ಅವು ನೆರೆಯ ಚೀನಾದಲ್ಲಿ ತಯಾರಾಗುವ ಸಾಮಾಗ್ರಿಗಳಿಗಿಂತ ಗುಣಮಟ್ಟದಲ್ಲಿ ಎಷ್ಟೋ ಪಟ್ಟು ಮಿಗಿಲು ಎಂದು ನನ್ನ ಧೃಡ ಭರವಸೆ. “Finishing” ಬಗ್ಗೆ ನಮ್ಮ ತಯಾರಕರು ಸ್ವಲ್ಪ ಹೆಚ್ಚು ಧ್ಯಾನ ಕೊಡಬೇಕೋ ಏನೋ!
ನನಗೆ ಇದರ ಬಗ್ಗೆ ಈಗಲೇ ತಿಳಿದಿದ್ದು! ಬಹಳ ಒಳ್ಳೆ ಸುದ್ದಿ. ಮೊನ್ನೆ ತಾನೆ ಸಪ್ನಾ ಪುಸ್ತಕ ಮಳಿಗೆಗೆ ಹೋಗಿ ಹೊಸ ಚಲನಚಿತ್ರ ಕೊಳ್ಳುವಾಗ ಎಲ್ಲೆಲ್ಲೂ ಮೋಸರ್ ಬೇರ DVD ಗಳ ರಾಶಿ. ನನಗೆ ಗೊತ್ತಿದ್ದ ವಿಷಯ ಅಂದರೆ, ಇದು ಅತಿ ಕಡಿಮೆ ಬೆಳೆಯ DVD ಅನ್ನುವುದು ಮಾತ್ರ. ಖಂಡಿತ ನಿಮ್ಮ ಈ ಲೇಖನ ಹೆಮ್ಮೆ ತರುವ ವಿಷಯವಾಗಿದೆ. ಧನ್ಯವಾದಗಳು.