- Jun17
ಕನ್ನಡ ಸಂಗೀತ ಪ್ರಾಕಾರಗಳು
ಗುರುದೇವ; ವಿಭಾಗ: ಸಾಹಿತ್ಯ;‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಹೀಗೆಂದು ನ್ರಪತುಂಗ ಕವಿ ಕನ್ನಡಿಗರನ್ನು ಬಣ್ಣಿಸಿದ್ದಾನೆ! ಓದು ಬರಹ ತಿಳಿಯದ ಕನ್ನಡಿಗರೂ ಕಾವ್ಯ-ಕವಿತೆ ಬಲ್ಲವರಾಗಿದ್ದರು ಎನ್ನುತ್ತಾನೆ ಆತ! ಜಾನಪದ ಗೀತೆಗಳು ಕನ್ನಡದ ಹಳ್ಳಿಹಳ್ಳಿಗಳಲ್ಲೂ ಪ್ರಸಿದ್ಧ! ಈ ಗೀತೆಗಳ ರಚನೆಕಾರರು ಸಾಮಾನ್ಯ ಹಳ್ಳಿಜನ! ಸಂಗೀತವೂ ಅವರದ್ದೇ!
ಇನ್ನು ಸುಗಮ ಸಂಗೀತ. ಇದು ಕಾವ್ಯ ಗಾಯನ. ಕುವೆಂಪು, ಜಿ ಎಸ್ ಎಸ್, ಬೇಂದ್ರೆ ಮುಂತಾದ ಮಹಾಕವಿಗಳ ಗೀತೆಗಳ ಗಾಯನ. ಇಲ್ಲಿ ಸಂಗೀತಕ್ಕಿಂತ ಸಾಹಿತ್ಯ ಮುಖ್ಯ. ಆದ್ದರಿಂದ ಸುಗಮ ಸಂಗೀತವನ್ನು ಕೊಳಲು/ವೀಣೆಯಲ್ಲಿ ನುಡಿಸುವುದಿಲ್ಲ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರಂತಹ ಗಾಯಕರೇ ಬೇಕು.
ಭಕ್ತಿ ಗೀತೆಗಳು, ಕೀರ್ತನೆಗಳು. ಇವು ಧಾತು ಪ್ರಧಾನ ಗೀತೆಗಳು. ಇಲ್ಲಿ ಸಾಹಿತ್ಯಕ್ಕಿಂತ ಸಂಗೀತವೇ ಮುಖ್ಯ. ಪುರಂದರ ದಾಸರು, ಕನಕದಾಸರು ಇತ್ಯಾದಿ ದಾಸರ ರಚನೆಗಳು ಇಲ್ಲಿವೆ. ಸಂಗೀತ ಪ್ರಧಾನವಾದ್ದರಿಂದ, ಈ ಗೀತೆಗಳನ್ನು ವೀಣೆ ವೇಣುಗಳಲ್ಲೂ ನುಡಿಸಬಹುದು.
ಚಿತ್ರಗೀತೆಗಳು. ಮೊದಲೆಲ್ಲ ಚಿತ್ರಗೀತೆಗಳಲ್ಲಿ, ಮೊದಲು ಸಂಧರ್ಭಕ್ಕೆ ತಕ್ಕ ಸಾಹಿತ್ಯ ರಚನೆ ಮಾಡಿ ಅನಂತರ ಅದಕ್ಕೆ ಸರಿಯಾಗಿ ಸಂಗೀತ ರಚನೆ ಮಾಡುತಿದ್ದರು. ಆದ್ದರಿಂದ ಅಂದಿನ ಚಿತ್ರಗೀತೆಗಳಲ್ಲಿ ಸಾಹಿತ್ಯದ ಛಾಪು ಎದ್ದು ಕಾಣುತಿತ್ತು. ‘ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚೆಲುವೆ’
ಆದರೆ ಇಂದು ಚಿತ್ರಗೀತೆಗಳಲ್ಲಿ ಮೊದಲು ಸಂಗೀತ ಸಂಯೋಜಿಸಿ ಅನಂತರ ಅದಕ್ಕೆ ತಕ್ಕ ಸಾಹಿತ್ಯ ರಚನೆ ಮಾಡುತ್ತಾರೆ. ಆದ್ದರಿಂದ ಇಂದಿನ ಗೀತೆಗಳಲ್ಲಿ ಸಾಹಿತ್ಯದ ಅಭಿವ್ಯಕ್ತಿ ಕಡಿಮೆ, ಸಂಗೀತದ ಅಬ್ಬರ ಜಾಸ್ತಿ! ‘ತಾಲಿಬಾನ್ ಅಲ್ಲ ಅಲ್ಲ, ಬಿನ್ ಲಾಡೆನ್ ಅಲ್ಲ ಅಲ್ಲ’

’




