ಅಮೇರಿಕಾದಲ್ಲಿ ರಾಷ್ಟ್ರಾಧ್ಯಕ್ಷ ಚುನಾವಣೆಗಳು ಸಮೀಪಿಸುತ್ತಿವೆ ದೇಶದ ಎರಡೂ ಪ್ರಮುಖ ರಾಜಕೀಯ ಪಕ್ಷಗಳಾದ ಡೆಮೊಕ್ರಾಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಚುನಾವಣೆ ಗೆಲ್ಲಲ್ಲು ಹಣಾಹಣಿ ನಡೆಸುತ್ತಿವೆ. ಭಯೋತ್ಪಾದನೆ ಚುನಾವಣೆಯ ಪ್ರಮುಖ ವಿಷಯವಾಗಿದೆ. ಈ ಬಗ್ಗೆ ದೇಶದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಏನೆನ್ನುತ್ತಾರೋ ನೋಡೋಣ! ಡೆಮೊಕ್ರಾಟ್ ಅಭಿಪ್ರಾಯ – ಭಯೋತ್ಪಾದನೆ ಮತ್ತು ಒಂದು ದೇಶ ಡೆಮೊಕ್ರಾಟ್ ಅಭ್ಯರ್ಥಿ ಬಾರಾಕ್ ಒಬಾಮಾ ಪ್ರಕಾರ, ಆತನೇನಾದರೂ ಅಮೇರಿಕಾದ ರಾಷ್ಟ್ರಾಧ್ಯಕ್ಷನಾದರೆ, ಅವರು ಮಾಡುವ ಮೊದಲ ಕೆಲಸ, “ಇರಾಕ್ ನಿಂದ ಆಮೇರಿಕನ್ ಸೇನೆಯನ್ನು ವಾಪಸು ಪಡೆದು ಅದನ್ನು ಪಾಕಿಸ್ತಾನಕ್ಕೆ [...]
ಟಾಂಕ್ರೆಡೋ ತೂಫಾನು!
ಆಗಸ್ಟ್ ೦೯ಮತ್ತೊಂದು ವಿಕೆಟ್ ಪತನ?
ಆಗಸ್ಟ್ ೦೯Click here for the english version of this article ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಂದರೆ ಶಾಸಕಾಂಗ (ಸರಕಾರ, ಮಂತ್ರಿಗಳು, ಶಾಸಕರು, ಲೋಕಸಭಾ ಸದಸ್ಯರು ಇತ್ಯಾದಿ) ರಾಜ್ಯಾಂಗ (ಅಧಿಕಾರಿಗಳು) ನ್ಯಾಯಾಂಗ (ವಕೀಲರು, ನ್ಯಾಯಮೂರ್ತಿಗಳು) ಪತ್ರಿಕೋದ್ಯಮ (ಮಾಧ್ಯಮ, ಪತ್ರಕರ್ತರು) ನಮಗೆಲ್ಲ ತಿಳಿದಿರುವಂತೆ ಭಾರತದಲ್ಲಿ ಶಾಸಕಾಂಗ ಮತ್ತು ರಾಜ್ಯಾಂಗದ ಮೇಲೆ ಜನರಿಗಿರುವ ನಂಬಿಕೆ ಅಷ್ಟಕ್ಕಷ್ಟೆ.. ಸರಕಾರ, ಮಂತ್ರಿಗಳು, ಶಾಸಕರು ಇವರಲ್ಲಿ ಹೆಚ್ಚಿನ ಮಂದಿ ಭ್ರಷ್ಟರು, ಅಧಿಕಾರಿಗಳೂ ಇದಕ್ಕೆ ಹೊರತಲ್ಲ.. ಎಲ್ಲ ಕೆಲಸಕ್ಕೂ ಲಂಚ ಕೊಡಬೇಕು.. ಜನರಿಗೆ ಅಲ್ಪ ಸ್ವಲ್ಪ ವಿಶ್ವಾಸವೇನಾದರೂ [...]
ಮತ್ತೊಂದು ಪಾಕ್ ಕ್ಷಿಪಣಿ ಪರೀಕ್ಷೆ
ಜುಲೈ ೩೦ಇತ್ತೀಚಿನ ಸುದ್ದಿ: “ಪಾಕಿಸ್ತಾನಿ ಮಿಲಿಟರಿ ಮೂಲಗಳ ಪ್ರಕಾರ ‘ಪಾಕಿಸ್ತಾನವು ತನ್ನ ಪರಮಾಣು ಬಾಂಬನ್ನು ಹೊತ್ತೊಯ್ಯುವ ಕ್ಷಮತೆಯುಳ್ಳ ರಾಡಾರ್ ನಿರ್ದೇಶಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದೆ’. ಈ ಸಂಬಂಧ ಪಾಕ್ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಮತ್ತು ಪ್ರಧಾನಿ ಶೌಕತ್ ಅಜೀಜ್ ದೇಶದ ವಿಜ್ಞಾನಿ ಹಾಗೂ ತಂತ್ರಜ್ಞಾನಿಗಳನ್ನು ಅಭಿನಂದಿಸಿದ್ದಾರೆ!” ನಿಜಕ್ಕೂ ಇದರ ಅರ್ಥ ಏನೆಂದರೆ “ಪಾಕಿಸ್ತಾನವು ಉತ್ತರ ಕೊರಿಯಾ ತಯಾರಿತ ಪರಮಾಣು ಕ್ಷಮತೆಯ ಕ್ಷಿಪಣಿಯನ್ನು ಸೌದಿ ಅರೇಬಿಯಾದ ಹಣ ಸಹಾಯದಿಂದ ಕೊಂಡುಕೊಂಡು, ನಂತರ ಪಾಕ್ ವಿಜ್ಞಾನಿಗಳು ಆ ಕ್ಷಿಪಣಿಯ ಎಡಪಂಥೀಯ ಕೆಂಬಣ್ಣಕ್ಕೆ ಪಾಕಿ ಹಸಿರು ಬಣ್ಣ [...]
ಎಡಪಂಥೀಯತೆ – ಚೀನಾದ ದುರದೃಷ್ಟ
ಜುಲೈ ೨೭Click here for the English version of this article ಈ ಕೆಳಗಿನ ವಾಕ್ಚಿತ್ರವನ್ನು ನೋಡಿದರೆ ನಿಮಗೇ ಗೊತ್ತಾಗುತ್ತೆ ಚೈನಾದಲ್ಲಿ ಇವತ್ತು ಏನು ನಡೀತಾ ಇದೆ ಅಂತ. ಇಂಥಹ ಒಂದು ಅಭಿವೃದ್ಧಿ ನಮ್ಮ ದೇಶಕ್ಕೂ ಬೇಕಂತೀರಾ? ಬೇಡವೇ ಬೇಡಪ್ಪ. ನಮ್ಮ ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಸ್ವಲ್ಪ ಮಂದಗತಿಯಲ್ಲಿ ಸಾಗಿದರೂ ಪರ್ವಾಗಿಲ್ಲ, ನಮಗೆ ಇಂಥಹ ಒಂದು ದಬ್ಬಾಳಿಕೆಯ ಎಡಪಂಥೀಯ ಆಳ್ವಿಕೆ ಮಾತ್ರ ಬೇಡ. ಏನಂತೀರಾ? ನೀವೇನಾದರೂ ಎಡಪಂಥೀಯ ಬೆಂಬಲಿಗರಾಗಿದ್ದರೆ ಒಮ್ಮೆ ಈ ಕೆಳಗಿನ ಚಿತ್ರ ನೋಡಿ ನಂತರ ಯೋಚನೆ ಮಾಡಿ ನೀವು [...]
ಗೋವಿನ ಹಾಡು
ಜುಲೈ ೦೮“ತಬ್ಬಲಿಯು ನೀನಾದೆ ಮಗನೆ” ಚಿತ್ರದ ಸುಮಧುರ ಸಂಗೀತದ ಜಾನಪದ ”ಗೋವಿನ ಹಾಡು”
ಕೇರಳದಲ್ಲಿ “ಕನ್ನಡ ಮಾತ್ರ!”
ಜುಲೈ ೦೮ನಮ್ಮ ಜನ ಹೆಂಗಂದ್ರೆ…
ಜೂನ್ ೧೭ನಮ್ಮ ಜನ ಹೆಂಗಂದ್ರೆ ೪೫ ರೂಪಾಯಿ ಕೊಟ್ಟು ಕೋಕಾಕೋಲಾ ತಗೊಳ್ತಾರೆ, ಆ ಕಂಪನಿಗೆ ಅದರಲ್ಲಿ ೪೦ ರೂಪಾಯಿ ಲಾಭ! ಅದೇ ಜನ, ಎಳನೀರು ಮಾರುವವನು ೧೦ ರೂಪಾಯಿ ಅಂದರೆ ೬ ರೂಪಾಯಿಗೆ ಕೇಳುತ್ತಾರೆ!! ಕೋಕಾಕೋಲಾ ಆರೋಗ್ಯಕ್ಕೆ ಹಾನಿಕಾರಕ, ಎಳನೀರು ಅತ್ಯುತ್ತಮ ಪಾನೀಯ! ಬಿಗ್ ಬಜಾರ್, ಸುಭೀಕ್ಷಾ, ಮಂಡೆ ಟು ಸಂಡೆ ಇತ್ಯಾದಿ ಮಳಿಗೆಗಳಲ್ಲಿ ನೂರಾರು ರೂಪಾಯಿ ಕೊಟ್ಟು ಹಣ್ಣು, ತರಕಾರಿ ಕೊಳ್ಳುತ್ತಾರೆ ಮನೆ ಬಾಗಿಲಿಗೆ ಬರುವ ಹಣ್ಣು ತರಕಾರಿ ಗಾಡಿ ಮಾರುವವನ ಬಳಿ ೨-೫ ರೂಪಾಯಿಗೆ ಚೌಕಾಸಿ ಮಾಡ್ತಾರೆ! ಬಹುರಾಷ್ಟ್ರೀಯ [...]
ಕನ್ನಡ ಸಂಗೀತ ಪ್ರಾಕಾರಗಳು
ಜೂನ್ ೧೭‘ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಹೀಗೆಂದು ನ್ರಪತುಂಗ ಕವಿ ಕನ್ನಡಿಗರನ್ನು ಬಣ್ಣಿಸಿದ್ದಾನೆ! ಓದು ಬರಹ ತಿಳಿಯದ ಕನ್ನಡಿಗರೂ ಕಾವ್ಯ-ಕವಿತೆ ಬಲ್ಲವರಾಗಿದ್ದರು ಎನ್ನುತ್ತಾನೆ ಆತ! ಜಾನಪದ ಗೀತೆಗಳು ಕನ್ನಡದ ಹಳ್ಳಿಹಳ್ಳಿಗಳಲ್ಲೂ ಪ್ರಸಿದ್ಧ! ಈ ಗೀತೆಗಳ ರಚನೆಕಾರರು ಸಾಮಾನ್ಯ ಹಳ್ಳಿಜನ! ಸಂಗೀತವೂ ಅವರದ್ದೇ! ಇನ್ನು ಸುಗಮ ಸಂಗೀತ. ಇದು ಕಾವ್ಯ ಗಾಯನ. ಕುವೆಂಪು, ಜಿ ಎಸ್ ಎಸ್, ಬೇಂದ್ರೆ ಮುಂತಾದ ಮಹಾಕವಿಗಳ ಗೀತೆಗಳ ಗಾಯನ. ಇಲ್ಲಿ ಸಂಗೀತಕ್ಕಿಂತ ಸಾಹಿತ್ಯ ಮುಖ್ಯ. ಆದ್ದರಿಂದ ಸುಗಮ ಸಂಗೀತವನ್ನು ಕೊಳಲು/ವೀಣೆಯಲ್ಲಿ ನುಡಿಸುವುದಿಲ್ಲ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿಯವರಂತಹ [...]
ಕನ್ನಡದ Quick Brown Fox
ಮೇ ೨೩ಪುಣ್ಯಾತ್ಮ ಸ್ನೇಹಿತನೊಬ್ಬ ಕಳಿಸಿದ email - ಎಲ್ಲ ಕನ್ನಡಿಗರಿಗಾಗಿ ಈ ಪದ್ಯದ ತುಣುಕಲ್ಲಿ ಕನ್ನಡದ ಸಂಪೂರ್ಣ ಸ್ವರಮಾಲೆಯನ್ನು ಉಪಯೋಗಿಸಲಾಗಿದೆ!




