ಬೆಂಗಳೂರು ವೋಲ್ವೊ

ನೀವು BMTC ಯ VOLVO ಬಸ್ ಗಳಲ್ಲಿ ಓಡಾಡುತ್ತೀರ?  VOLVOಗಾಗಿ ಕಾಯುವಾಗ ನಿಮ್ಮ ಬಸ್ ಈಗ ಎಲ್ಲಿದೆ ಎಂದು ತಿಳಿಯಬೇಕೆ? ಇದೋ ಇಲ್ಲಿದೆ, ನಿಮಗಾಗಿ ಈ online ಸೇವೆ, ನಿಮ್ಮ mobile ನಿಂದ ಒಂದು sms ಕಳಿಸಿ, ನೀವು ಕಾಯುತ್ತಿರುವ VOLVO ಈಗ ಎಲ್ಲಿದೆ ಎಂದು ತಿಳಿದುಕೊಳ್ಳಿ. ವಿವರಗಳಿಗಾಗಿ ಸಂಪರ್ಕಿಸಿ http://www.clinf.com/yi/Index.html

ಕ.ರಾ.ರ.ಸಾ.ಸಂ

ನಿಮಗಿದು ತಿಳಿದಿದೆಯೆ? ನಮ್ಮ ಕರಾರಸಾಸಂ (KSRTC) ಯಲ್ಲಿ ನೀವು ಎಲ್ಲಿಗಾದರೂ ಬಸ್ ಪ್ರಯಾಣ ಮಾಡುವವರಾಗಿದ್ದರೆ ಈಗ ನೀವು ನಿಮ್ಮ ಟಿಕೆಟನ್ನು online booking ಮೂಲಕ ಕಾದಿರಿಸಬಹುದು. http://www.ksrtc.in/AWATAROnline/ ಈ ಮೇಲ್ಕಂಡ website ಗೆ ಹೋಗಿ, ನಿಮ್ಮ ಟಿಕೆಟನ್ನು ಕಾದಿರಿಸಿ. ನೀವು ಲಭ್ಯವಿರುವ ಬಸ್ ಗಳನ್ನು ಹುಡುಕಿ, ನಿಮಗೆ ಬೇಕಾದ ದಿನಾಂಕಕ್ಕೆ ಬೇಕಾದ ಬಸ್ ನ್ನು ಆರಿಸಿ, ಲಭ್ಯವಿರುವ ಆಸನಗಳನ್ನು ನೋಡಿ, ನಿಮಗೆ ಬೇಕಾದ ಆಸನಗಳನ್ನು ಆರಿಸಿ, ನಿಮ್ಮ credit card ಮೂಲಕ onlineನಲ್ಲಿಯೇ ಶುಲ್ಕ ಪಾವತಿಸಬಹುದು. ನಂತರ ಪ್ರಯಾಣದ [...]

ಹಾರುತ ದೂರ ದೂರ

ಹಂಸವೆಲ್ಲಿ ಹಾರುವೆ? ಸಪ್ತ ಸಾಗರದಾಚೆಗೆ, ಸುಪ್ತ ಮನಸಿನ ತೀರಕೆ ನಿನ ಕನಸಿನ ರೆಕ್ಕೆಯ ಗರಿ ಬಿಚ್ಚಿ ಒಳ ಮನಸಿನ ದಿಟ್ಟೆಯ ಗೆರೆ ಹಚ್ಚಿ ದೂರತೀರದಾಚೆಗೆ ನೂರು ಮನಸಿನ ವೇಗದಿ ನೆನಪಿನ ಮನೆಯಂಗಳದಿಂದ ಭರವಸೆಗಳ ಕಂಗಳ ತುಂಬಿ ನಾಳೆಗಳ ನಾಡಿಗೆ ಸಾಧನೆಯ ಗೂಡಿಗೆ ಸರಿಗಮಗಳ ಗಾಳಿಯನೇರಿ ಅಪಸ್ವರಗಳ ಧಾಳಿಯ ಮೀರಿ ರಾಗಗಳ ನಾಡಿಗೆ ಅನುರಾಗದ ಗೂಡಿಗೆ ನಿನ್ನೆಯ ಕಹಿ ಜಾಲವ ಹರಿದು ನಿನ್ನಯ ವರ ಮಾಲೆಯ ಹಿಡಿದು ನಲ್ಲನಿರುವ ನಾಡಿಗೆ ನಾಳೆ ಬಾಳೊ ಗೂಡಿಗೆ -ಗೀಚಿದವರು ಗುಂಗುರು ಗುರು

ಕನ್ನಡ ನಾರಿ ಮಹಾತ್ಮೆ

ಭಾರತದಲ್ಲಿ ಬ್ರಿಟೀಷರ ವಿರುದ್ಡ ಹೋರಾಡಿದ ಮೊದಲ ಮಹಿಳೆ ಯಾರೆಂದು ಕೇಳಿದರೆ ಏನೆನ್ನುತ್ತೀರಿ? ಝಾನ್ಸಿ ರಾಣಿ ಲಕ್ಷ್ಮೀಬಾಯಿ ನಿಮ್ಮ ಉತ್ತರವಾದರೆ ಅದು ತಪ್ಪು ! ಭಾರತದಲ್ಲಿ ಬ್ರಿಟೀಷರ ವಿರುದ್ಡ ಹೋರಾಡಿದ ಮೊದಲ ಮಹಿಳೆ – ಕನ್ನಡದ ವೀರ ವನಿತೆ ಕಿತ್ತೂರು ಚೆನ್ನಮ್ಮ ಅಲ್ಲದೆ ಅದಕ್ಕೂ ಮುಂಚೆ ಪೋರ್ಚುಗೀಸರ ವಿರುದ್ಡ ಕನ್ನಡದ ಇನ್ನೋರ್ವ ವೀರ ವನಿತೆ ಅಬ್ಬಕ್ಕ ಹೋರಾಡಿದ್ದಳು. ಆದ್ದರಿಂದ, ಭಾರತದಲ್ಲಿ ಯೂರೋಪಿಯನ್ನರ ವಿರುದ್ಡ ಹೋರಾಡಿದ ಮೊದಲ ಮಹಿಳೆ – ಕನ್ನಡದ ವೀರ ವನಿತೆ ಅಬ್ಬಕ್ಕ

ಸುಧೆಯೋ ಕನ್ನಡ ಸವಿನುಡಿಯೋ

ಕನ್ನಡದ ಬಗ್ಗೆ ನಿಮಗೆಷ್ಟು ಗೊತ್ತು? ಭಾರತೀಯ ಭಾಷೆಗಳಲ್ಲಿ ಸಂಸ್ಕ್ರತ ಹಾಗೂ ತಮಿಳಿನ ನಂತರ ಕನ್ನಡವೇ ಅತ್ಯಂತ ಹಳೆಯ ಭಾಷೆ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸವಿದೆ ಕನ್ನಡಕ್ಕೆ ಅತಿ ಹೆಚ್ಚು ಜ್ನಾನಪೀಠ ಪ್ರಶಸ್ತಿಗಳು ದೊರೆತಿವೆ. ಇದುವರೆಗೂ ಒಟ್ಟು 7. ರಾಷ್ತ್ರ ಭಾಷೆ ಹಿಂದಿಗೆ 6 ದೊರೆತಿವೆ. ಆಚಾರ್ಯ ವಿನೋಭಾ ಭಾವೆ ಕನ್ನಡದ ಲಿಪಿಯನ್ನು ‘ವಿಶ್ವ ಲಿಪಿಗಳ ರಾಣಿ’ ಎಂದು ಕರೆದರು ಇಂಗ್ಲೀಷಿಗೆ ಸ್ವಂತ ಲಿಪಿಯಿಲ್ಲ, ಅದನ್ನು ರೋಮನ್ ಲಿಪಿಯಲ್ಲಿ ಬರೆಯುತ್ತಾರೆ. ಹಿಂದಿಗೆ ಸ್ವಂತ ಲಿಪಿಯಿಲ್ಲ, ಅದನ್ನು ದೇವನಾಗರಿ ಲಿಪಿಯಲ್ಲಿ [...]

ಸೃಷ್ಟಿ-ಸಂಗೀತ

ದುಂಬಿಯ ಝೇಂಕಾರ ಋಷಿ ಮುನಿ ಓಂಕಾರ ಮಂತ್ರದ ಹ್ರೀಂಕಾರ ಸಿಂಹದ ಹೂಂಕಾರ ನಾದಲೀನ ಲೀನನಾದೆ ನಾ ನೀದಮಾಗ ಗಾನದಿಂ ದಿನ || ಬೆಳ್ಳಿಕಿರಣಗಳ ಅರುಣರಾಗ ಬಳ್ಳಿಮರದಡಿಯ ನಿಸರಿಗಮಗ ಗಲ್ಲಿಹೈಕಳ ಕುಣಿತ, ಲಾಗ, ಹಲ್ಲಿ ಮೈಮರೆತು ಲೊಚೆದ ರಾಗ ನಾ ತಲ್ಲೀನ ನಾದೆನೀ ದಿನ ಧೀಂ ತಿಲ್ಲಾನವಾಯಿತೀ ಮನ || ಜಲದ ಧಾರೆ ಕಲಕಲಕಲರವ ಜಲಜದೊಡತಿ ಕರ ಸರಿವ ಪರಿಯವ ಜಲದಿ ನೀರೆ ನಲಿ ನಲಿವ ಉಲಿತವ ಜಳಕವಾಡುತಿರೆ ಬಳುಕೊ ಅಲೆ ರವ ಪುರುಷ ಪ್ರಕೃತಿ ಸರಿಗ ಸಂಗಮ [...]

ಕನ್ನಡ ಸಿನೆಮಾ ಚೆನ್ನಾಗಿಲ್ಲ ಅಂದ ಅವನು

ಮೊನ್ನೆ ಹಳೆಯ ಸ್ನೇಹಿತನೊಬ್ಬ ಸಿಕ್ಕ ಅದೂ ಇದೂ ಮಾತಾಡ್ತಾ, ” ‘ಮುಂಗಾರು ಮಳೆ’ ನೋಡಿದ್ಯಾ? ಒಂಥರಾ ಚೆನ್ನಾಗಿದೆ” ಅಂದೆ. ಅದಕ್ಕೆ ಅವನು, ‘ಕನ್ನಡ ಸಿನೆಮಾ ಚೆನ್ನಾಗಿರೊಲ್ಲ, ಅದಕ್ಕೆ ನಾನು ನೋಡೊಲ್ಲ’ ಅಂದ. ಒದೀಬೇಕು ಅನ್ನಿಸ್ತು, ಆದರೂ ಸುಧಾರಿಸಿಕೊಂಡು ಕೇಳಿದೆ, ‘ನೀನು ನೋಡಿದ ಕೊನೆಯ ಕನ್ನಡ ಚಿತ್ರ ಯಾವುದಣ್ಣ?’ ‘ನೆನಪಿಲ್ಲ ಗುರು, ಒಂದು ಹತ್ತು ವರ್ಷದ ಮೇಲಾಗಿದೆ’ ಅಂದ ನನ್ನ ಕೈಲಿ ಇನ್ನು ತಡೆಯೊಕ್ಕಾಗ್ಲಿಲ್ಲ, ‘ಡಬ್ಬಾ ನನ್ನ ಮಗನೆ, ಹತ್ತು ವರ್ಷದಿಂದ ಒಂದೂ ಕನ್ನಡ ಚಿತ್ರ ನೋಡಿಲ್ಲ ನೀನು. ಅದು [...]

ಕಾಲು – ಮೊಬೈಲು

ಹೀಗೊಂದು SMS ಬಂತು: Mobileನಲ್ಲಿ balance ಇಲ್ಲ ಅಂದ್ರೆ ಕಾಲ್ ಮಾಡೊಕ್ಕಾಗೊಲ್ಲ  ಮನುಷ್ಯಂಗೆ ಕಾಲಿಲ್ಲ ಅಂದ್ರೆ balance ಮಾಡೊಕ್ಕಾಗೊಲ್ಲ !