ನಿಮಗಿದು ತಿಳಿದಿದೆಯೆ? ನಮ್ಮ ಕರಾರಸಾಸಂ (KSRTC) ಯಲ್ಲಿ ನೀವು ಎಲ್ಲಿಗಾದರೂ ಬಸ್ ಪ್ರಯಾಣ ಮಾಡುವವರಾಗಿದ್ದರೆ ಈಗ ನೀವು ನಿಮ್ಮ ಟಿಕೆಟನ್ನು online booking ಮೂಲಕ ಕಾದಿರಿಸಬಹುದು.
http://www.ksrtc.in/AWATAROnline/
ಈ ಮೇಲ್ಕಂಡ website ಗೆ ಹೋಗಿ, ನಿಮ್ಮ ಟಿಕೆಟನ್ನು ಕಾದಿರಿಸಿ. ನೀವು ಲಭ್ಯವಿರುವ ಬಸ್ ಗಳನ್ನು ಹುಡುಕಿ, ನಿಮಗೆ ಬೇಕಾದ ದಿನಾಂಕಕ್ಕೆ ಬೇಕಾದ ಬಸ್ ನ್ನು ಆರಿಸಿ, ಲಭ್ಯವಿರುವ ಆಸನಗಳನ್ನು ನೋಡಿ, ನಿಮಗೆ ಬೇಕಾದ ಆಸನಗಳನ್ನು ಆರಿಸಿ, ನಿಮ್ಮ credit card ಮೂಲಕ onlineನಲ್ಲಿಯೇ ಶುಲ್ಕ ಪಾವತಿಸಬಹುದು.
ನಂತರ ಪ್ರಯಾಣದ ದಿನ ನಿಮ್ಮ ಯಾವುದಾದರೊಂದು ಗುರುತಿನ ಚೀಟಿಯನ್ನು ತೋರಿಸಿ ನಿಲ್ದಾಣದಲ್ಲಿಯೇ ಟಿಕೆಟನ್ನು ಪಡೆಯಬಹುದು.




