ಮೊನ್ನೆ ಹಳೆಯ ಸ್ನೇಹಿತನೊಬ್ಬ ಸಿಕ್ಕ

ಅದೂ ಇದೂ ಮಾತಾಡ್ತಾ, ” ‘ಮುಂಗಾರು ಮಳೆ’ ನೋಡಿದ್ಯಾ? ಒಂಥರಾ ಚೆನ್ನಾಗಿದೆ” ಅಂದೆ.

ಅದಕ್ಕೆ ಅವನು, ‘ಕನ್ನಡ ಸಿನೆಮಾ ಚೆನ್ನಾಗಿರೊಲ್ಲ, ಅದಕ್ಕೆ ನಾನು ನೋಡೊಲ್ಲ’ ಅಂದ.

ಒದೀಬೇಕು ಅನ್ನಿಸ್ತು, ಆದರೂ ಸುಧಾರಿಸಿಕೊಂಡು ಕೇಳಿದೆ, ‘ನೀನು ನೋಡಿದ ಕೊನೆಯ ಕನ್ನಡ ಚಿತ್ರ ಯಾವುದಣ್ಣ?’

‘ನೆನಪಿಲ್ಲ ಗುರು, ಒಂದು ಹತ್ತು ವರ್ಷದ ಮೇಲಾಗಿದೆ’ ಅಂದ

ನನ್ನ ಕೈಲಿ ಇನ್ನು ತಡೆಯೊಕ್ಕಾಗ್ಲಿಲ್ಲ, ‘ಡಬ್ಬಾ ನನ್ನ ಮಗನೆ, ಹತ್ತು ವರ್ಷದಿಂದ ಒಂದೂ ಕನ್ನಡ ಚಿತ್ರ ನೋಡಿಲ್ಲ ನೀನು. ಅದು ಹೇಗೆ ಕನ್ನಡ ಚಿತ್ರ ಚೆನಾಗಿರೊಲ್ಲ ಅಂತ ಹೇಳಿದೆ? ಹಾಗೆ ಹೇಳೋದು ನಿಮಗೆಲ್ಲ ಒಂದು ಷೋಕಿ ನನ್ನ ಮಕ್ಳಾ, ನೋಡಿದ್ರೆ ತಾನೆ ಚೆನ್ನಾಗಿದೆಯಾ ಇಲ್ವಾ ಅಂತ ತಿಳಿಯೋದು? ಕನ್ನಡ ನೋಡೋಕ್ಕೆ ಇಷ್ಟ ಇಲ್ಲ ಅಂದ್ರೆ ನೋಡ್ಬೇಡ, ಕತ್ತೆಬಾಲ ಹೋಯ್ತು, ಆದ್ರೆ ನೋಡ್ದೆ ಮಾಡ್ದೆ ಚೆನ್ನಾಗಿಲ್ಲಾ ಹಾಗೆ ಹೀಗೆ ಅಂತೆಲ್ಲ ಬಾಯಿಗೆ ಬಂದ ಹಾಗೆ ಹೇಳಿದರೆ ಧರ್ಮದೇಟು ಬೀಳುತ್ತೆ’ ಅಂದೆ

ಅದಾದ ಮೇಲೆ ಅವನು ಕನ್ನಡ ಸಿನೆಮಾ ನೋಡಿದನೋ ಇಲ್ಲವೋ ಗೊತ್ತಿಲ್ಲ, ನನ್ನನ್ನು ನೋಡೋದನ್ನಂತೂ ಬಿಟ್ಟ, ಕತ್ತೆಬಾಲ :-)